ಬಿ. ಜಿ. ಜಯರಾಮಾಚಾರ್ಯ (ವೇದಬ್ರಹ್ಮಶ್ರೀ ವಿದ್ವಾನ್ ಬಿ. ಜಿ. ಜಯರಾಮಾಚಾರ್ಯ)


ವಿದ್ವಾನ್ ಬಿ. ಜಿ. ಜಯರಾಮಾಚಾರ್ಯ ಅವರು ಬೆಂಗಳೂರು ಜಿಲ್ಲೆ ಹೊಸಕೋಟೆ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ವೇದಬ್ರಹ್ಮಶ್ರೀ ಗೋವಿಂದಾಚಾರ್ಯ ಹಾಗೂ ಶ್ರೀಮತಿ ರಾಧಮ್ಮ ದಂಪತಿಗಳ ಸುಪುತ್ರರಾಗಿ 14ನೇ ಅಕ್ಟೋಬರ್ 1933 ಭಾವನಾಮ ಸಂವತ್ಸರದಲ್ಲಿ ಜನಿಸಿದರು.

ಹನ್ನೊಂದು ಮಂದಿ ದೊಡ್ಡ ಕುಟುಂಬದಲ್ಲಿ ವಿದ್ವಾನ್ ಬಿ. ಜಿ. ಜಯರಾಮಾಚಾರ್ಯ ಅವರು ನಾಲ್ಕನೆಯವರು. ಇವರ ತಂದೆ ವೇದಬ್ರಹ್ಮಶ್ರೀ ಗೋವಿಂದಾಚಾರ್ಯ ಅವರು ಪೌರೋಹಿತ್ಯ ವೃತ್ತಿಯಲ್ಲಿ ಬಿದರಹಳ್ಳಿ ಹಾಗೂ ಸುತ್ತಮುತ್ಲಲಿನ ಹಲವು ಊರುಗಳಲ್ಲಿ ಪ್ರಸಿದ್ಧರಾದವರು.

ಆಚಾರ್ಯರು ಬಿದರಹಳ್ಳಿಯಲ್ಲಿ ಪ್ರಾರ್ಥಮಿಕ ಶಾಲೆಯನ್ನು ಮುಗಿಸಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದರು. ಸಂಸ್ಕೃತ ಪಾಠಶಾಲೆಗೆ ಸೇರಿ ಅಚಾರ್ಯಯರು ವಾರಾನ್ನ ಮಾಡಿಕೊಂಡು ವೇದಾಧ್ಯಯನದೊಂದಿಗೆ ಮಾಧ್ಯಮಿಕ ಶಾಲೆ ಸೇರಿದರು. ಉನ್ನತ ವೇದ ವ್ಯಾಸಾಂಗ ಹಾಗೂ ಸಂಸ್ಕೃತ ಅಧ್ಯಯನಕ್ಕಾಗಿ ಮೈಸೂರಿಗೆ ತೆರಳಿದರು. ಅಲ್ಲಿನ ಸಂಸ್ಕೃತ ಕಾಲೇಜಿಗೆ ಸೇರಿ ಕ್ರಮ, ಘನ ಹಾಗೂ ವಿದ್ವತ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಪಾಂಡಿತ್ಯ ಗಳಿಸಿದರು.