# ನಮ್ಮೂರ ಇತಿಹಾಸ ಚಾಲೆಂಜ್*
ಅಬ್ಬಿಗೆರೆ
ಗದಗ ಜಿಲ್ಲಾ ರೋಣ ತಾಲೂಕಿನ ದೊಡ್ಡಹಳ್ಳಿ ಇದು ಗದಗ ಬಾಗಲಕೋಟೆ ಮಾಗ೯ದಲ್ಲಿ SH83 ರಲ್ಲಿ ಬರುವದು.
ಗ್ರಾಮದ ಇತಿಹಾಸದ ಬಗ್ಗೆ ಸ್ಪಷ್ಟವಾದ ಐತಿಹಾಸಿಕ ಕುರುಹುಗಳಿಲ್ಲ. ಆದರೂ ಸುಮಾರು 15 ನೇ ಶತಮಾನದಲ್ಲಿ 'ಗ್ರಾಮ ಉದಯವಾಗಿದೆ ಎಂದು ಊಹಿಸಲಾಗಿದೆ.
ಕರ್ನಾಟಕ ವಿವಿಯ ವಿದ್ಯಾರ್ಥಿಗಳ ಸಂಶೋಧನೆಗಳಿಂದ 'ಡಾ // ಗೋವಿಂದರಾಜ ಗಿರಡ್ಡಿಯವರ "ಒಂದು ಬೇವಿನ ಮರದ ಕಥೆ" ಪುಸ್ತಕದಿಂದ ಗ್ರಾಮದ ಅಲ್ಪ ಸ್ವಲ್ಪ ಇತಿಹಾಸ ತಿಳಿಯಲು ಸಹಕಾರಿ.
15ನೇ ಶತಮಾನದಲ್ಲಿ ಉತ್ತರ ಕರ್ನಾಟಕ ಮಹರಾಷ್ಟ್ರ ಹಾಗೂ ಆಂದ್ರದಿಂದ ವಲಸೆ ಬಂದ ಕೆಲವರಿಂದ ಗ್ರಾಮ ರೂಪಗೊಂಡಿರ ಬಹುದು.
''ದೇವಗಿರಿ" ಎ೦ದು ಕರೆಯಲಾಗುವ ಕೆರೆಯನ್ನು ನಿರ್ಮಿಸಿಕೊಂಡು ಆ ಜಲ ಮೂಲ ರಿಂದ ಗ್ರಾಮ ಅಭಿವೃದ್ಧಿ ಹೊಂದಿತು. ನಂತರ ಜನ ಸಂದಣಿ ಹಾಗೂ ಗ್ರಾಮಾದ ಅಭಿವೃದ್ಧಿಯಾದಂತೆ ದೇವಗಿರಿ ಕೆರೆ ಮಲಿನವಾಯಿತು. ನಂತರ ಕೆಂಪು ಕೆರೆಯನ್ನು ನಿರ್ಮಿಸಿ ಜಲ ಮೂಲವನ್ನಾಗಿಸಿಕೊಂಡು ಗ್ರಾಮ ಅಭಿವೃದ್ಧಿ ಹೊಂದಿತು. ಮಸಾರಿ ನೀರು ಕೆಂಪಾಗಿದ್ದರಿಂದ ಅದರ ಮೂಲವನ್ನು ಹೊಂದಿದ ಈ ಕೆರೆನೀರು ಕೆಂಪಾಗಿದ್ದರಿಂದ ಇದಕ್ಕೆ ಕೆಂಪು ಕೆರೆ ಎಂದು ಹೆಸರು.
ಸುಟ ಬಸಪ್ಪ ದೇವಸ್ಥಾನ, ಅಕ್ಕಮಹಾದೇವಿ ದೇವಸ್ಥಾನ, ಹನುಮನಾಳರವರ ಒಣಿಯ ಪಾಳು ದೇವಸ್ಥಾನದಲ್ಲಿ ಕೆಲವು ವೀರಗಲ್ಲುಗಳು ದೊರೆತಿವೆ. ಇದರಿಂದ ಗ್ರಾಮದ ಮಾಹಿತಿ ತಿಳಿಯ ಬಹುದು.
ವಿರುಪಾಕ್ಷೇಶ್ವರ ದೇವಸ್ಥಾನ ಶ್ರೀಕಂಠಿ ಬಸವಣ್ಣ ದೇವಸ್ಥಾನ ಚಾಲುಕ್ಯ ಶೈಲಿಯಲ್ಲಿದೆ. ಗ್ರಾಮದೇವತೆ ದ್ಯಾಮಮ್ಮ ದೇವಸ್ಥಾನವಾಗಿದೆ.
ಗ್ರಾಮವು ಪ್ರಾರಂಭದಲ್ಲಿ ಹಿರೇಮಠ ಹಾಗೂ ಅರಳೆಲೆ ಮಠಗಳ ಮಧ್ಯದಲ್ಲಿ ರೂಪಗೊಂಡಿರಬಹುದು. ಅಂದರೆ ಗೌಡರ ಓಣಿ ಹಾಗೂ ಮಾಳ ಶೆಟ್ಟಿಯವರ ಓಣಿಗಳ ಆಸುಪಾಸು ರೂಪಗೊಂಡಿರಬಹುದು. ಹಾಗೂ ಗ್ರಾಮಕ್ಕೆ ಸಹಕಾರಿಯಾದ ಜನರಿಂದ ಗ್ರಾಮ ರೂಪಗೊಂಡಿರಬಹುದು.
ಗ್ರಾಮದ ಪ್ರಮುಖ ಉದ್ಯೋಗ ಕೃಷಿಯಾಗಿದೆ. 15 ನೇ ಶತಮಾನದಲ್ಲಿ ಗ್ರಾಮ ರೂಪಗೊಂಡರೂ ಹೆಚ್ಚಾಗಿ ಅಭಿವೃದ್ಧಿ ಹೊಂದಿಲ್ಲ. ಅದಕ್ಕೆ ಗ್ರಾಮದ ಜಲಮೂಲ ಬತ್ತಿದ್ದು, ಭೀಕರ ಬರಗಾಲ ಸಾಂಕ್ರಾಮಿಕ ರೋಗಗಳು ಹಾಗೂ ವಲಸೆ ಈ ಎಲ್ಲ ಕಾರಣಗಳಿಂದ ಗ್ರಾಮ ಹೆಚ್ಚಾಗಿ ಅಭಿವೃದ್ಧಿ ಹೊಂದಿಲ್ಲದಿರಬಹುದು.
ಸ್ವಾತಂತ್ರ್ಯ ಪೂರ್ವದಲ್ಲಿ 18 ನೇ ಶತಮಾನದ ಅಂತ್ಯದಲ್ಲಿಕನ್ನಡ ಶಾಲೆಗಳು ಪ್ರಾರಂಭವಾದವು. ಅಲ್ಲದೆ ನರೇಗಲ್ಲಿನ ಅನ್ನದಾನೀಶ್ವರ ವಿದ್ಯಾಸಂಸ್ಥೆಯಿಂದ ಗ್ರಾಮದ ಸಾಕ್ಷರತೆ ಹೆಚ್ಚಾಗುತ್ತಾ ಸಾಗಿದೆ. ಇದರ ಪರಿಣಾಮದಿಂದ
ಕೊಪ್ಪಳದ ಮಾಜಿ MLA MS ಪಾಟೀಲರು, ಕರ್ನಾಟಕದಲ್ಲಿ ಪ್ರಥಮವಾಗಿ ಪಂಚಮಸಾಲಿ ಸಂಘದ ಸಂಸ್ಥಾಪಕಾಧ್ಯಕ್ಷರಾದ BM ಹನುಮನಾಳ ಡಾII ಗೋವಿಂದರಾಜ ಗಿರಡ್ಡಿ, ಸೋಮಶೇಖರ ಇಮ್ರಾಪೂರ, D A ಉಪಾಧ್ಯ, ಸವಣೂರ ಮಠ , ಡಾIIGH ಇಮ್ರಾಪೂರ. ಮಾಜಿ ZP ಗಳಾದ ಸೋಮಣ್ಣ ಹರ್ಲಾಪೂರ, ರೇಣುಕಾ ಬಸವರಡ್ಡೇರ, ಡಾII R B ಬಸವರಡ್ಡೇರ ಮುಂತಾದ ನಾಡಿನ ಪ್ರಮುಖ ವ್ಯಕ್ತಿಗಳ ಉದಯವಾಗಿದೆ.
ಹಲವಾರು ಧಾರ್ಮಿಕ ಮಹಾಸ್ವಾಮಿಗಳಾದ ಜಗದ್ಗುರು ರಾಜಯೋಗೇಂದ್ರ ಮಹಾಸ್ವಾಮಿಗಳು ರಂಭಾಪುರಿ ಪೀಠ ಇವರು ಅಬ್ಬಿಗೆರೆಯ ಸಂಸ್ಕೃತ ಪಾಠಶಾಲೆಯಲ್ಲಿ ಅಭ್ಯಸಿದ್ದರಂತೆ, ಅಲ್ಲದೆ, ಕರ್ನಾಟಕದ ಪ್ರಥಮ ಸಂಸ್ಕೃತ ಪಾಠಶಾಲೆ ಅಬ್ಬಿಗೆರೆಯಲ್ಲಿಯ ಹಿರೇಮಠದಲ್ಲಿ ಇತ್ತು. ಸಿದ್ದರ ಬೆಟ್ಟದ ವೀರೇಶ ದೇವರು. ಹಾಸನ ಜಿಲ್ಲೆಯ ಜೇವರ್ಗಿ ಮಠದ ಮಹಾಸ್ವಾಮಿಗಳು ಅಬ್ಬಿಗೆರೆಯಲ್ಲಿ ಅವತರಿಸಿದ್ದಾರೆ.
ಇಂದು ಗ್ರಾಮದಲ್ಲಿ 2 ಕನ್ನಡ ಮಾಧ್ಯಮ ಶಾಲೆಗಳು, ಉರ್ದು ಶಾಲೆ, 2 ಪ್ರೌಢ ಶಾಲೆಗಳು, DA ಉಪಾದ್ಯರವರ ಕಲಾ ವಿಶ್ವವಿದ್ಯಾಲಯದಂತಹ ಶಿಕ್ಷಣ ಸಂಸ್ಥೆಗಳು ಇವೆ.
ಗ್ರಾಮಕ್ಕೆ ಅಬ್ಬಿಗೆರೆ ಎಂದು ಹೆಸರು ಹೇಗೆ ಬಂದಿತು ಎಂಬುದಕ್ಕೆ ಜಿಜ್ಞಾಸೆ ಇದೆ. ಹಿರಿಯರ ಪ್ರಕಾರ ಗ್ರಾಮದೇವತೆಯನ್ನು ಅಬ್ಬೆ ಎ೦ದು. ಅವಳಿರುವ 'ಸ್ಥಾನಕ್ಕೆ ಗೆರೆ ಎ೦ದುಕರೆಯುತ್ತಿದ್ದರು. ಅಬ್ಬೆ ಅಂದರೆ ತಾಯಿ,ಗೆರೆ ಎಂದರೆ ಊರು ಎ೦ದು ಈ ಎರಡು ಪದಗಳಾದ ಅಬ್ಬೆ + ಗೆರೆ = ಅಬ್ಬಿಗೆರೆ ಯಾಯಿತು. ಎಂದು ತರ್ಕಿಸಬಹುದು.
ಗ್ರಾಮವು ಸುಮಾರು 1800 ಕುಟುಂಬಗಳನ್ನು ಹಾಗೂ 10000 ಕ್ಕಿಂತ ಹೆಚ್ಚು ಜನ . ಹಾಗೂ ಸುಮಾರು 23 ಜಾತಿ ಜನಾಂಗದವರನ್ನು ಒಳಗೊಂಡಿದೆ. ಲಿಂಗಾಯತರು, ಅಂದರೆ ಜಂಗಮರು, ಪಂಚಮಸಾಲಿಗಳು, ರಡ್ಡಿ, ಬಣಜಿಗೆರು.ವಾಲ್ಮಿಕಿ, ಮುಸ್ಲಿಂ, ಬಡಿಗರು, ಕಂಬಾರ, ಕುಂಬಾರ' ಬ್ರಾಮ್ಹಣ, ಆಚಾರ್ಯ, ಭೋವಿ, ಹರಿಜನ' ಹಾಲುಮತ (ಕುರುಬರು)ಅಂಬಿಗರು,'ಮರಾಠ ಅಕ್ಕಸಾಲಿಗರು. ರಜಪೂತರು. ಉಪ್ಪಾರರು. ಕಿಳ್ಳಿಕೇತರ ಸಮುದಾಯ ಇನ್ನು ಮುಂತಾದ ಜಾತಿ ಜನಾಂಗದವರಿದ್ದು ಸೌಹಾರ್ದತೆಯಿಂದ ಎಲ್ಲರ ಉತ್ಸವಗಳಲ್ಲಿ ಪಾಲ್ಗೊಳ್ಳುತ್ತಾರೆ.
ಗ್ರಾಮದ ಇತಿಹಾಸದ ಬಗ್ಗೆ ಐತಿಹಾಸಿಕ ಕುರುಹುಗಳು ಇಲ್ಲ. ಆದರೆ ಹಿರಿಯರ ವಿವರಣೆಗೆ, ಸಂಶೋಧನ ಗ್ರಂಥಗಳು'ವೀರಗಲ್ಲುಗಳು, ದೇವಾಲಯಗಳ ವಾಸ್ತುಶಿಲ್ಪಶೈಲಿ.ಪುಸ್ತಕಗಳು, ಹೆಳವರು ತಿಳಿಸುವ ವಿಚಾರಗಳ ಸಹಾಯದಿಂದ ಗ್ರಾಮದ ಇತಿಹಾಸ ತಿಳಿಯಲು ಪ್ರಯತ್ನಿಸಲಾಗಿದೆ.
ವಂದನೆಗಳು.
ಬಸವರಾಜ ಪಲ್ಲೇದ .
ಅಬ್ಬಿಗೆರೆ.