ಮನುಷ್ಯರ ಗಮನಕ್ಕೆ..

ಪಕ್ಷಿಗಳೆ ಇಲ್ಲದಿದ್ದರೆ ಜಗತ್ತು ಹೇಗಿರುತ್ತದೆ? ಈಗಿನ ಕಾಲದಲ್ಲಿ ಪಕ್ಷಿಗಳ ಸಂಖ್ಯೆ ಸಂಕೀರ್ಣವಾಗುವುದಕ್ಕೆ ಕಾರಣ ಮನುಷ್ಯ..! ಹೇಗೆ ಎನ್ನುತ್ತೀರಾ? ಹೌದು ಮಾನವ ಮಾಡುವ ಜಲ ಮಾಲಿನ್ಯ, ವಾಯುಮಾಲಿನ್ಯ, ಶಬ್ದಮಾಲಿನ್ಯ, ಆಹಾರಮಾಲಿನ್ಯದಿಂದ ಜಗತ್ತಿನಲ್ಲಿ ಕಣ್ಣಿಗೆ ಕಾಣದ ಜೀವಿಗಳಿಗೂ ಸಹ ಬದುಕಲು ಸಾಧ್ಯವಾಗದ ಪರಿಸ್ಥಿತಿ ಬಂದೊದಗಿದೆ.

ಮನುಷ್ಯ ನಿರ್ಮಿಸಿದ ನೆಟ್ವರ್ಕ್ ನಿಂದಾಗಿ ಪುಟ್ಟ ಹೃದಯವನ್ನೂಳಗೊಂಡ ಪಕ್ಷಿಗಳು ಹೃದಯಾಘಾತದಿಂದ ಸಾವನ್ನಪ್ಪುತ್ತಿವೆ..!

ಒಂದು ಕಾಲದಲ್ಲಿ ಅಕ್ಕಿಯನ್ನು ಸ್ವಚ್ಚ ಮಾಡಲೆಂದು ಬಾಗಿಲಿಗೆ ಕುಳಿತರೆ ಸಾಕು ಆರಿಸಿ ಎಸೆದ ಅಕ್ಕಿಯನ್ನು ತಿನ್ನಲು ನೂರಾರು ಪಕ್ಷಿಗಳು ಬರುತ್ತಿದ್ದವು. ದೇವಸ್ತಾನದ ಸಂದಿಗಳೆ ಅವುಗಳ ಮನೆಯಾಗಿರುತ್ತಿತ್ತು. ಕುರುಡರೂ ಸಹ ಪಕ್ಷಿಗಳ ಕಲರವ ಕೇಳಿ ಬೆಳಗಾಯಿತು ಎಂದು ಅರಿಯುತ್ತಿದ್ದರು. ಅಂತಹ ಕಾಲಮಾನ ಇಂದು ಮಾಯವಾಗಿ ಬರಿ ಪುಸ್ತಕ ಹಾಗೂ ನಯನಪಥಗಾಮಿಯ ಬರದಲ್ಲಿ ಮಾತ್ರ ಕಾಣಸಿಗುತ್ತವೆ.

ಮುಂದೊಂದು ದಿನ ಪಕ್ಷಿಗಳೇ ಇಲ್ಲದಂತಾಗಿ ಮನುಷ್ಯ ಮೃತ್ಯುವಿನಂತಹ ರೋಗಗಳಿಗೆ ತುತ್ತಾಗಿ ಔಷದಿ ಸಿಗದೆ ಸಾಯುವುದಂತು ಕಚಿತ..!!

ರೈತ ಬೆಳೆದ ಕೆಲವು ಬೆಳೆಗಳಲ್ಲಿ ಅಂಟಿದ ಕೀಟಗಳನ್ನು ತಿಂದು ಹಸಿವು ನೀಗಿಸಿಕೊಳ್ಳುವುದಲ್ಲದೆ ರೈತನ ಫಲ ಉಳಿಸುತ್ತಿರುವ ಪಕ್ಷಿಗಳು ಇಲ್ಲದಾದಾಗ ಹೊಲಗಳಲ್ಲಿ ಕಿತಗಳದ್ದೆ ಆಡಳಿತ..! ಆ ಕೀಟಗಳನ್ನು ಸಾಯಿಸಲು ಅನೇಕ ರೀತಿಯ ಕೆಮಿಕಲ್ ಔಷದ ಸಿಂಪಡಣೆ ಪ್ರಾರಂಭವಾಗುತ್ತದೆ.... ಕೆಮಿಕಲ್ ಯುಕ್ತ ತರಕಾರಿ, ಕಾಳುಗಳನ್ನು ಜೀವನ ಪರ್ಯಂತ ತಿನ್ನುವ ಪರಿಸ್ಥಿತಿ ಬಂದು ಮನುಷ್ಯನ ಆಯುಷ್ಯ ಸಹ ಕ್ಷೀಣಿಸುತ್ತದೆ... ಅಲ್ಲದೆ ಅನೇಕ ರೋಗಗಳು ಬರುತ್ತವೆ..! ಆ ರೋಗಗಳನ್ನು ಹೋಗಲಾಡಿಸಲು ಅನೇಕಾನೇಕ ಔಷದಿಗಳನ್ನೂ ಸಹ ಮನುಷ್ಯನಿಗೆ ನೀಡಬೇಕಾಗಿ ಮನುಷ್ಯ ಕೇವಲ ಕೆಮಿಕಲ್ ನಿಂದ ತುಂಬಿ ಹೋಗುತ್ತಾನೆ... ಶಕ್ತಿ, ಚೈತನ್ಯವೇ ಇಲ್ಲದಂತಾಗಿ ಶಕ್ತಿ ಬರಿಸುವ ಮೆಡಿಸನ್ ಸೇವಿಸಲು ಪ್ರಾರಂಭಿಸುತ್ತಾನೆ..! ವರ್ಷದಲ್ಲಿ 100 ದಿನ ಆಸ್ಪತ್ರೆಯಲ್ಲೇ ಜೀವಿಸುವಂತಾಗಿ ಅವನ ಆಯಸ್ಸು ಕ್ಷೀಣಿಸುತ್ತದೆ..! ಆರೋಗ್ಯಕರ ಮನುಷ್ಯನಿಗೆಯೇ ಮಕ್ಕಳಾಗುವ ಸಾಧ್ಯತೆ ಕ್ಷೀಣಿಸಿದ ಇಂದಿನ ಜಗತ್ತಿನಲ್ಲಿ ರೋಗ ತಿಂಬಿಕೊಂದು ಶಕ್ತಿಹೀನನಾಗಿರುವ ಮನುಷ್ಯನಿಗೆ ಮಕ್ಕಳಾಗುವ ಸಾಧ್ಯತೆ ಇಲ್ಲದಂತಾಗಿ ಮನುಕುಲ ನಾಶದ ಅಂಚಿಗೆ ಬರುತ್ತದೆ..!

ಸಮಸ್ಯೆಯಲ್ಲಿ ಕೊರಗುತ್ತಿರುವ ಮನುಷ್ಯನ ಕರ್ಣಗಳಿಗೆ ಪಕ್ಷಿಗಳ ದ್ವನಿ, ಕಲರವ ಕೇಳಿದಾಗ ಎಷ್ಟೋ ಆನಂದ ಸಿಗುವ ಬದಲಿಗೆ ಬರಿ ಕಪ್ಪೆಗಳ ಕರಕರ, ವಿಷಕಾರಿ ಹುಳುಗಳ ನಿರಂತರ ಶಬ್ದದಿಂದ ಮೆದುಳಿನ ಸ್ವಾಮ್ಯತೆ ಕ್ಷೀಣಿಸಿ ಮತ್ತಷ್ಟು ನೋವಿಗೆ ಶರಣಾಗಬೇಕಾಗುತ್ತದೆ..!

ಹಾಗಾಗಿ ದಯವಿಟ್ಟು ಪಕ್ಷಿಗಳನ್ನು ಉಳಿಸಿ 🙏🙏 ನಿಮ್ಮ ಮನೆಯ ಮೇಲೆ 5 ಪಕ್ಷಿ ಕುಟುಂಬ ವಾಸಿಸುವ ಹಾಗೆ ಅವುಗಳಿಗೆ ಪುಟ್ಟ ಮನೆ ನಿರ್ಮಿಸಿ ದಿನನಿತ್ಯ ದವಸ ದಾನ್ಯಗಳನ್ನು ಕೊಡುತ್ತಾ ಅವುಗಳನ್ನು ಸಹ ನಮ್ಮಂತೆಯೇ ಜಿವಿಸುವುದಕ್ಕೆ ಅವಕಾಶ ಮಾಡಿಕೊಡೋಣ..