Malligawad is a village in Hubballi taluk Dharwad district of Karnataka, India.[1]

Malligawad
Village
Country India
StateKarnataka
DistrictDharwad
Government
 • TypePanchayat Raj
 • BodyGram Panchayat
Population
 (2011)
 • Total2,062
Languages
 • OfficialKannada
Time zoneUTC+5:30 (IST)
ISO 3166 codeIN-KA
Vehicle registrationKA-63
Websitekarnataka.gov.in

Village History

edit
  • ಮಲ್ಲಿಗವಾಡ

ಮಲ್ಲಿಗವಾಡ ಗ್ರಾಮ ಧಾರವಾಡ ಜಿಲ್ಲೆ ಹುಬ್ಬಳ್ಳಿ ತಾಲೂಕಿಗೆ ಪೂರ್ವ ದಿಕ್ಕಿಗೆ ಕಡೆಯ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಎಲ್ಲ ಧರ್ಮದ ಜನಾಂಗದ ಜನ ವಾಸಿಸುತ್ತಿದ್ದಾರೆ. ಮಲ್ಲಿಗವಾಡ ಎಂಬ ಹೆಸರು ಮಲ್ಲಿಗೆ ಎಂಬ ವ್ಯಕ್ತಿಯಿಂದ ಬಂದಿದೆ. ಮಲ್ಲಿಗೆ+ವಾಡ = ಮಲ್ಲಿಗವಾಡ ಎಂದು ಕರೆಯಲಾಗುತ್ತದೆ. ಮಲ್ಲಿಗವಾಡ ಗ್ರಾಮವೂ ಹುಬ್ಬಳ್ಳಿ 35 ಕಿ.ಮೀ ಕುಂದಗೋಳ 25 ಕಿ.ಮೀ ಲಕ್ಷ್ಮೇಶ್ವರ 28 ಕಿ.ಮಿ ಶಿರಹಟ್ಟಿ 23 ಕಿ.ಮೀ ಗದಗ 30 ಕಿ.ಮೀ ಅಣ್ಣಿಗೇರಿ 11 ಕಿ.ಮೀ ನವಲಗುಂದ 32 ಕಿ.ಮೀ ಏಳು ತಾಲೂಕುಗಳ ಮಧ್ಯೆ ಇದ್ದು ಧಾರವಾಡ, ಗದಗ ಜಿಲ್ಲೆ ನಡುವೆ ಕೇಂದ್ರ ಬಿಂದುವಾಗಿ ಪರಿಣಮಿಸಿದೆ. ಮಲ್ಲಿಗವಾಡ ಗ್ರಾಮದ ಸುತ್ತಾ ಕೋಳಿವಾಡ 2 ಕಿ.ಮೀ ನೀಲಗುಂದ 8 ಕಿ.ಮೀ ಅಂತೂರು-ಬೆಂತೂರು 8 ಕಿ.ಮೀ ಮಜ್ಜಿಗುಡ್ಡ 4 ಕಿ.ಮೀ ಕಲ್ಲೂರ 8 ಕಿ.ಮೀ ರೊಟ್ಟಿಗವಾಡ 10 ಕಿ.ಮೀ ಉಮಚಗಿ 8 ಕಿ.ಮೀ ಮಾಡಳ್ಳಿ 10 ಕಿ.ಮೀ ಗ್ರಾಮಗಳು ಮಿತ್ರ ಗ್ರಾಮಗಳಾಗಿ ಎಲ್ಲ ರೀತಿಯ ಸಹಕಾರ ನೀಡುತ್ತವೆ. ಮಲ್ಲಿಗವಾಡ ಗ್ರಾಮದ ಯುವಕರು ಸರಕಾರದ ಪ್ರತಿಯೊಂದು ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುವುದೇ ಹೆಮ್ಮೆಯ ವಿಷಯ

  • ಸೋಮೇಶ್ವರ ದೇವಾಲಯ

ಮಲ್ಲಿಗವಾಡ ಗ್ರಾಮದಲ್ಲಿ 12ನೇ ಶತಮಾನದ ಕಲ್ಯಾಣ ಚಾಲುಕ್ಯರ ಕಾಲದ ಶ್ರೀ ಸೋಮೇಶ್ವರ ದೇವಾಲಯವಿದೆ ಜಕಣಾಚಾರಿ ಶಿಲ್ಪಿಯಿಂದ ಕೆತ್ತಲ್ಪಟ್ಟ ದೇವಸ್ಥಾನವಾಗಿದೆ.

  • ಗ್ರಾಮ ಪಂಚಾಯತ್ ಕಾರ್ಯಾಲಯ

ಮಲ್ಲಿಗವಾಡ ಗ್ರಾಮ ಪಂಚಾಯತ್ ಕಾರ್ಯಾಲಯ ಹೊಂದಿದ್ದು, ಮಲ್ಲಿಗವಾಡ ಮತ್ತು ಉಮಚಗಿ ಗ್ರಾಮಗಳನ್ನೊಳಗೊಂಡ ಪಂಚಾಯಿತಿ ಕೇಂದ್ರ ಸ್ಥಾನ ಹೊಂದಿದೆ. ಮಲ್ಲಿಗವಾಡ ಗ್ರಾಮ ಅಭಿವೃದ್ಧಿಯಿಂದ ಹಿಂದುಳಿದು ಇದುವರೆಗೂ ಗ್ರಾಮಕ್ಕೆ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿದೆ. ಇತ್ತೀಚೆಗೆ ಗ್ರಾಮ ಪಂಚಾಯತ್ ಅನುದಾನ ಪಡೆದು ಕೆಲಸ ನಿರ್ವಹಣೆ ಮಾಡಲಾಗುತ್ತಿದೆ.

  • ಸಾರಿಗೆ ಸೌಕರ್ಯ

ಮಲ್ಲಿಗವಾಡ ಗ್ರಾಮಕ್ಕೆ ಪ್ರತಿನಿತ್ಯ ಹುಬ್ಬಳ್ಳಿ - ಶಿರಹಟ್ಟಿ ಮಾರ್ಗದ ಸಾರಿಗೆ ಮಲ್ಲಿಗವಾಡ ಗ್ರಾಮದ ಮೇಲೆ ಅರ್ಧಗಂಟೆಗೊಂದು ಸಂಚಾರಿಸುತ್ತದೆ. ಮಲ್ಲಿಗವಾಡ - ಹುಬ್ಬಳ್ಳಿ ಬಸ್ ಮತ್ತು ಮಲ್ಲಿಗವಾಡ - ಗದಗ ಬಸ್ ಸಂಚಾರ ನಡೆಸುತ್ತದೆ. ಮತ್ತು ಗದಗ - ಕುಂದಗೋಳ ಬಸ್ ಮಲ್ಲಿಗವಾಡ ಗ್ರಾಮದ ಮೇಲೆ ಸಂಚಾರ ನಡೆಸುತ್ತಿದೆ

Demographics

edit

As of the 2011 Census of India there were 497 households in Malligawad and a total population of 2,062 consisting of 1062 males and 1002 females. There were 226 children ages 0–6.[2]

References

edit
  1. ^ Village Directory Archived 22 July 2011 at the Wayback Machine, 2001 Census of India
  2. ^ "C.D. Block Wise Primary Census Abstract Data(PCA) - KARNATAKA". Census Commission of India. Retrieved 1 August 2020.



Category:Villages in India